Pages

Wednesday, October 31, 2012

ವಿಶ್ವ ಉದಯಿಸಿದಾಗ


ವಿಶ್ವ ಉದಯಿಸಿದಾಗ ಇದ್ದವರು ಎಷ್ಟು ಜನ
ಆ ಗಂಡು - ಆ ಹೆಣ್ಣು ಅವರಿಬ್ಬರು ನಮ್ಮ ಮೂಲ
ಒಂದೇ ಮೂಲ ಅಂದ ಹಾಗೇ ಹುಟ್ಟಿತೇಗೆ ದ್ವೇಷದ ಜಾಲ
ಎಲ್ಲಾ ಸಂಬಂಧಿಕರೆ ಬಿಡಿಸಿಟ್ಟರೆ ಜಗದ ಜೀವ ಜಾಲ

ಹುರುಳಿ ಹೋಗಿದೆ ಕಾಲ ಚಕ್ರ
ಮರೆತು ಹೋಗಿದೆ ನೆನಪಿನಾ ಗೆರೆ
ಹುಡುಕ ಹೊರಟರೆ ಇತಿಹಾಸ ಬಲುದೂರ

ಸಮಸ್ಯೆಗಳ ಸುಳಿ ನನ್ನಿಂದ ಅವನಿಗೆ
ಸಮಸ್ಯೆಗಳ ಸುಳಿ ಅವನಿಂದ ಇವನಿಗೆ

ಸಮಸ್ಯೆಗಳನ್ನು ಗೊತ್ತಿದ್ದೂ ಸೃಷ್ಟಿಸುತಾ
ಮುಗುಳ್ನಗುವ ನಾಟಕವಾಡುತಾ
ಮನಸಿಗೆ, ಹೃದಯಕ್ಕೆ ವಿಷವುಣಿಸಿ
ಸಂತೋಷದ ನೆಪದಲ್ಲಿ ತೇಲಿ
ನಾವಿದ್ದೇವೆ ವಿಷದ ಕಡಲಲ್ಲಿ

ವಿಶ್ವ ಉದಯಿಸಿದಾಗ ಇದ್ದವರು ಎಷ್ಟು ಜನ ??




ಒಂದೇ ಸಾವು





ಬೀದಿಯಲ್ಲಿ ನೋಡಿದ್ದು ಒಂದೇ ಸಾವು
ಆ ಮನದಲ್ಲಿ ತುಂಬಿ ಮಡುಗಟ್ಟಿತು ನೋವು  
ಪ್ರಶ್ನೆಗಳು ಉದ್ಬವಿಸಿದವು ಹಲವು ಹಲವು                                                
ಜ್ಞಾನೋದಯದೆಡೆಗೆ ನಡೆಸಿದವು
ಒಂದೇ ದಿನ ಸಾಕಾಯಿತು
ಜಗದ ಸಂಕಷ್ಠವನು ಅಳೆದು ನೋಡಲು   
ಒಂದೆ ಸಾವು ಸಾಕಾಯಿತು                                                       
ಸಿದ್ಧಾರ್ಥ ಬುದ್ಧನಾಗಲು


ದಿನವಿಡಿ ನೋಡುತಿಹೆವು ನಾವು                                          
ಸಾಲು ಸಾಲುಗಳ ಸಾವು
ನಮ್ಮಲ್ಲಿ ಮಡುಗಟ್ಟಬಹುದೆ ನೋವು?
ಪ್ರಶ್ನೆಗಳೇಳುತಿಹವೆ ಹಲವು ಹಲವು?

ಜ್ಞಾನೋದಯ ಬುದ್ಧನಿಗೆ
ಜ್ಞಾನ ಜಗದಗಲಕೆ
ಸತ್ಯ ಅಂಹಿಂಸೆಗಳ ಕೊಡುಗೆ ಜಗಕೆ
ಬೂದುಗನ್ನಡಿಯಿಟ್ಟು ಹುಡುಕಿದರೂ ಸಿಗಬಹುದೆನಮ್ಮೊಳಗೆ!

ಎಲ್ಲಿದ್ದೇವೆ ನಾವು ನಾಗರೀಕತೆಯ ನೆಪದಲಿ?
ತಂತ್ರಜ್ಞಾನದ ಬೆಳಕಿನ ಕತ್ತಲಲ್ಲಿ
ಮೌಲ್ಯಗಳ ಮಾರಾಟ ಮಾಡುವ ವ್ಯವಹಾರಿಕತೆಯಲಿ 
ಮಾನವೀಯತೆಯನ್ನು ಮುಚ್ಚಿಡುತ ಬಾಂಬುಗಳಲ್ಲಿ
ಎಲ್ಲಿದ್ದೇವೆ ನಾವು ? ಎಲ್ಲಿದ್ದೇವೆ ಎಲ್ಲಿದ್ದೇವೆ ?

Thursday, October 25, 2012

ದ್ವಂದ್ವ


ನನ್ನ ಗೆಳೆಯನಿಗೆ 

ಪ್ರೀತಿಸಿದ ಹುಡುಗಿ ಕೈ ಕೊಟ್ಟಾಗ

ಬುದ್ಧಿ ಕೆಟ್ಟು ಹುಚ್ಚು ಹಿಡಿಯಿತು


ನನ್ನ ಗೆಳೆಯನಿಗೆ

1 ಕೋಟಿ ಲಾಟರಿ ಒಡೆದಾಗ

HEART ಅಟ್ಯಾಕ್ ಆಯಿತು



ಪ್ರೀತಿಗಾಗಿ HEARTಅಟ್ಯಾಕ್ ಆಗಿಲ್ಲ!

ಹಣ ಸಿಕ್ಕಾಗ ತಲೆ ಕೆಟ್ಟಿ  ಹುಚ್ಚು  ಹಿಡಿಲಿಲ್ಲ!


ಪ್ರೀತಿ ಬುದ್ಧಿಯ ಮಾತು ಕೇಳಿತು

ಹಣಕ್ಕೆ ಹೃದಯ ಕೆಲಸಮಾಡಿತು


ಪ್ರೀತಿ ಹೃದಯದ ಮಾತಾಗಲಿ

ಹಣ ಬುದ್ಧಿವಂತಿಕೆಯ ಸ್ವತ್ತಾಗಲಿ


(ಆತ್ಮೀಯ ಗೆಳೆಯ .........................)

ಆಸ್ತಿಕನೂ ಅಲ್ಲ! -ನಾಸ್ತಿಕನೂ ಅಲ್ಲ


ಆಸ್ತಿಕನೂ ಅಲ್ಲ!
ನಾಸ್ತಿಕನೂ ಅಲ್ಲ!
ಆಸ್ತಿಕನೆನ್ನಲು ಆಸ್ತಿ ಇಲ್ಲ
ನಾಸ್ತಿಕನೆನ್ನಲು ನಿನ್ನ ಸ್ಥಿತಿ ಚೆನ್ನಾಗಿಲ್ಲ

ಆಸ್ತಿಕರೆಂದವರು ಆಸ್ತಿಕರಲ್ಲ
ನಾಸ್ತಿಕರೆಂದವರು ನಾಸ್ತಿಕರಲ್ಲ
ಆಸ್ತಿಕನಲ್ಲಿ ಪುರಾವೆ ಇಲ್ಲ ಪುರಾಣವಿದೆ
ನಾಸ್ತಿಕನೆನ್ನಲು ಈ ನನ್ನ  ಜ್ಞಾನ ಸಾಲದೆ?

ಇಲ್ದದ್ದನ್ನು ಇದೆ ಎಂದುಕೊಳ್ಳುವುದು ಹೇಗೆ
ಇರಬಹುದು ಎಂದರೆ ಕಾಣದೆ ಒಪ್ಪಿಕೊಳ್ಳುವುದೇ ಹೇಗೆ?

ಕಪ್ಪು ಬಿಳುಪು


ಅವನು ಕಪ್ಪು
ಇವಳು ಬಿಳುಪು
ಸೇರಿದರಾಗುವರು ಕಪ್ಪು ಬಿಳುಪು

ಅವನಿಗೆ ಅಳಕು
ಇವಳಿಗೆ ಬಳಕು
ಅವನನ್ನು ಮುಟ್ಟಿ ಕೈತೊಳೆದುಕೊಳ್ಳಬೇಕು
ಇವಳನ್ನು ಕೈ ತೊಳೆದು ಮುಟ್ಟಬೇಕು

ಹಣದ ಬಲ ಇವನ ಕಡೆ
ಸೌಂದರ್ಯದ ರಾಶಿ ಇವಳೆಡೆ
ಹಂಚಿಕೊಳ್ಳಲು ಇಬ್ಬರೂ ರೆಡಿ
ಇದನೋಡಿ ಮನೆಯವರು ಸಿಡಿಮಿಡಿ
ಕೊನೆಗೂ ಪ್ರೇಮಿಗಳ ಪಟ್ಟು ನೋಡಿ
ಮನೆಯವರೆಂದರು ಹಾಳಾಗಿ ಹೋಗಲಿ ಬಿಟ್ಟುಬಿಡಿ

ದೇವ ಮಾನವ

ದೇವ ಮಾನವ

ಕೃಪೆ : ಹಾದಿಮನಿ, ಪ್ರಜಾವಾಣಿ

ಕಾಣದ ಕೈಗಿರಲಿ ನಮ್ಮ ನಮನ

ಕಂಡ ಕಂಡ ಕಡೆ ಏಕೆ ಬೇಕು ಈ ಗುಡಿ ಗೋಪುರಗಳ ಪ್ರದರ್ಶನ



ಗುಡಿಸಲುಗಳೂ ಇಲ್ಲದಿರುವಾಗ


ಗುಡಿಗಳು ಏಕೆ ಬೇಕಿಗ?


ಹೊಟ್ಟೆಗೆ ಇಟ್ಟಿಲ್ಲದಿರುವಾಗ

ದೇವರಿಗೇಕೆ ನೈವೇದ್ಯ?


ತಪ್ಪು ಮಾಡದಿದ್ದಲ್ಲಿ

ಪಶ್ಚಾತಾಪ ಏಕೆ?


ಪಾಪ ಮಾಡದಿದ್ದದರೆ

ಗುಡಿಸುತ್ತ ಪ್ರದಕ್ಷಿಣೆ ಬೇಕೆ?