Pages

Monday, January 5, 2015

ಸರ್ಕಾರೇತರ ಸಂಸ್ಥೆ (NGO) ಎಂದರೇನು?



ವಿಶ್ವ ಸಂಸ್ಥೆಯ ಮಾಜಿ ಅಧ್ಯಕ್ಷ ಕೋಫಿ ಅನ್ನಾನ್ 21ನೇ ಶತಮಾನವನ್ನು ಎನ್ ಜಿ ಒ ಗಳ ಯುಗ ಎಂದುಬಣ್ಣಿಸಿದ್ದಾರೆ.
ಎನ್ ಜಿ ಒ ಎಂದರೆ ಸರ್ಕಾರೇತರ ಸಂಸ್ಥೆವಿಶ್ವಬ್ಯಾಂಕ್ ಪ್ರಕಾರ ಎನ್ ಜಿ ಒ ಗಳು ಖಾಸಗಿ ಸಂಸ್ಥೆಗಳು.ಸಂಕಷ್ಟದಲ್ಲಿರುವವರಿಗೆ ಪರಿಹಾರ ದೊರಕಿಸುವ ಚಟುವಟಿಕೆಯಲ್ಲಿ ತೊಡಗಿರುತ್ತವೆಅಲ್ಲದೆಬಡವರ ಹಿತರಕ್ಷಣೆಪರಿಸರಕಾಳಜಿಪ್ರಾಥಮಿಕ ಸಾಮಾಜಿಕ ಸೇವೆಗಳನ್ನು ಒದಗಿಸುವುದುಇಲ್ಲವೆ ಸಮುದಾಯದ ಅಭಿವೃದ್ಧಿ ಚಟುವಟಿಕೆಗಳನ್ನುಕೈಗೆತ್ತಿಕೊಳ್ಳುವುದುವಾಸ್ತವವಾಗಿಎನ್ಜಿಒಗಳು ಕಾನೂನು ಬದ್ಧವಾಗಿ ಸ್ಥಾಪಿತಗೊಂಡ ಸಂಸ್ಥೆಗಳುಸರ್ಕಾರದಿಂದಪ್ರತ್ಯೇಕಗೊಂಡು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುವು ಮತ್ತು ಸರಳ ಅರ್ಥದಲ್ಲಿ ಹೇಳುವುದಾದರೆ ಸರ್ಕಾರೇತರ,ಲಾಭರಹಿತಬದ್ಧತೆ ಇರುವ ಸಮೂಹಸಾರ್ವಜನಿಕರ ಹಿತರಕ್ಷಣೆಯೇ  ಸಮೂಹಗಳ ಉದ್ದೇಶಮಾನವ ಹಕ್ಕುಗಳು,ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವುದೇ ಇವುಗಳ ಮೂಲ ಉದ್ದೇಶವಾಗಿದೆಸಾಮಾನ್ಯವಾಗಿಎನ್ ಜಿ ಒ ಗಳು ಸರ್ಕಾರದಿಂದ ಪೂರ್ಣ ಪ್ರಮಾಣದಲ್ಲಿ ಅನುದಾನ ಪಡೆದುಕೊಳ್ಳುತ್ತವೆಕೆಲವು ಸಂದರ್ಭಗಳಲ್ಲಿ ಭಾಗಶಃದೇಣಿಗೆಯನ್ನು ಪಡೆಯುತ್ತವೆಸರ್ಕಾರೇತರ ಸಂಸ್ಥೆ ಎನ್ನಿಸಿಕೊಳ್ಳಲು ಸರ್ಕಾರಿ ಪ್ರತಿನಿಧಿಗಳನ್ನು ತನ್ನ ಸಂಸ್ಥೆಯಪ್ರತಿನಿಧಿತ್ವದಿಂದ ಅಥವಾ ಸದಸ್ಯತ್ವದಿಂದ ಹೊರಗಿರಿಸುತ್ತದೆಹಾಗೆಯೇ ಎನ್ ಜಿ ಒ ಗಳು ಎಂದಾಗ ಅವುಗಳು ಯಾವುದೇರಾಷ್ಟ್ರ ಇಲ್ಲವೇ ಅಂತಾರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಕಾನೂನು ಪರಿಹಾರ ದೊರಕಿಸಿಕೊಡುವ ಸಂಸ್ಥೆಗಳಲ್ಲಎನ್ನುವುದು ಗಮನದಲ್ಲಿರಬೇಕು.
ವಿಶ್ವ ಬ್ಯಾಂಕ್ ಪ್ರಧಾನವಾಗಿ ಎರಡು ರೀತಿಯಲ್ಲಿ ಎನ್ ಜಿ ಒ ಗಳನ್ನು ಗುರುತಿಸಿದೆಕಾರ್ಯಾತ್ಮಕ ಎನ್ಜಿಒಗಳು,ಸಲಹಾತ್ಮಕ ಎನ್ ಜಿ ಒ ಗಳೆಂದು ಸ್ಥೂಲವಾಗಿ ಅವುಗಳನ್ನು ವಿಂಗಡಿಸಲಾಗಿದೆಇವೆರಡರ ಪ್ರಮುಖ ಉದ್ದೇಶಗಳುಅಭಿವೃದ್ಧಿ ಆಧಾರಿತ ಯೋಜನೆಗಳನ್ನು ವಿನ್ಯಾಸಗೊಳಿಸಿ ಅವುಗಳ ಅನುಷ್ಠಾನಗೊಳಿಸುವುದು ಎನ್ ಜಿ ಒ ಗಳ ಪ್ರಮುಖಉದ್ದೇಶವಾಗಿದೆಕಾರ್ಯಾತ್ಮಕ ಎನ್ ಜಿ ಒ ಗಳನ್ನು ರಾಷ್ಟ್ರೀಯಅಂತಾರಾಷ್ಟ್ರೀಯ ಮತ್ತು ಸಮುದಾಯ ಆಧಾರಿತಸಂಘಟನೆಗಳೆಂದು ವರ್ಗೀಕರಿಸಬಹುದುಇನ್ನೊಂದೆಡೆ ಸಲಹಾತ್ಮಕ ಎನ್ ಜಿ ಒ ಗಳನ್ನು ಅಂತರಾಷ್ಟ್ರೀಯಸಂಘಟನೆಗಳೆಂದು ವಿಂಗಡಿಸಲಾಗುತ್ತದೆಅವುಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುವುದರ  ಜೊತೆಗೆನೀತಿ ನಿರೂಪಣೆಗಳನ್ನು ರೂಪಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತವೆ.

ಕೃಪೆ : ಯೋಜನಾನವೆಂಬರ್ 2011
ಜೋಮನ್ ಮ್ಯಾಥ್ಯುಜೊಬೈ ವರ್ಗೀಸ್

ಕನ್ನಡಕ್ಕೆ : ರಶ್ಮಿ ಎಸ್

No comments:

Post a Comment